Tಇದರ ಮೃದುವಾದ ಮೆತ್ತೆಯು, ಮೊಣಗಂಟಿನ ಸುತ್ತಲೂ ವೃತ್ತಾಕಾರವಾಗಿ ಸುತ್ತುವರೆದು, ಯಾವುದೇ ಭಂಗಿಯಲ್ಲಿಯೂ ಕೂಡ ಮೊಣಕಾಲಿನ ಟೊಪ್ಪಿಗೆಗೆ ದೃಢತೆ ನೀಡುವಂತೆ ರೂಪಿಸಲ್ಪಟ್ಟಿದೆ. ಮಂಡಿ ಚಿಪ್ಪಿಗೆ ಆಧಾರವಿರುವ ಡೈನ ಜೆನು ಆರ್ಥೋ ಮೊಣಕಾಲು ಪಟ್ಟಿಯು, ಎಡ ಮತ್ತು ಬಲ ಮಂಡಿಯ ಭಾಗಗಳಿಗೂ ಬಳಸಲು ಸೂಕ್ತವಾಗುವಂತೆ ಎಲ್ಲರಿಗೂ ಹೊಂದಾಣಿಕೆಯಾಗುವಂತಹ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ ಒಂದಕ್ಕೊಂದು ಎದಿರಾಗಿರುವ ವೆಲ್ಕ್ರೋ ಪಟ್ಟಿಗಳಿದ್ದು, ನಿಮ್ಮ ಕಾಲಿನಿಂದ ಪಟ್ಟಿಯು ಕೆಳಗೆ ಜಾರದಂತೆ ಹೆಚ್ಚುವರಿ ಒತ್ತಡ ಬೀರುತ್ತದೆ. ಇದರ ಕೆಳ ಹಿಡಿಕೆಗಳು ಮೊಣಕಾಲನ್ನು ಸಹಜವಾಗಿ ಅಲುಗಾಡಲು ಬಿಡುತ್ತವೆ.